‘ಮನುಜ ಜಾತಿ ತಾನೊಂದೆ ವಲಂ’ ಎಂದು ಪಂಪ ಮಹಾಕವಿ ನೂರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಬಸವಣ್ಣನ ವಚನಗಳಿಂದ ಹಿಡಿದು ಮಾರ್ಟಿನ್ ಲೂಥರ್‌ಕಿಂಗ್, ಅಬ್ರಹಾಂ ಲಿಂಕನ್, ಮಹಾತ್ಮಾಗಾಂಧಿ, ಅಂಬೇಡ್ಕರ್‌ರವರು ಹೀಗೆ ದೀನದಲಿತರು ಸಮಾಜದಲ್ಲಿ ತುಳಿತಕ್ಕೊಳಗಾದವರ ಬಗ್ಗೆ ಕಾಳಜಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಹಾಗಿದ್ದರೂ ನಿಜವಾಗಿ ಮನುಷ್ಯರೆಲ್ಲರೂ ಒಂದೆಯೇ ಎನ್ನುವುದು ತುಂಬ doubtful. ಇತ್ತೀಚೆಗಷ್ಟೆ ಬಿಬಿಎಂಪಿ ಕಾಪೊರೇಟರ್ ಅವರು ಕಚೇರಿಯೊಂದರ ಫ್ಯೂಸ್‌ನನ್ನು ತಮ್ಮನ್ನು ಒಳಗೆ ಹೋಗಲು ಪ್ರಶ್ನಿಸಿದುದಕ್ಕೆ ಥಳಿಸಿದರಂತೆ. ಅರಸೊತ್ತಿಗೆ ಇಲ್ಲದಿದ್ದರೂ ಆಧುನಿಕ ರಾಜ ಮಹಾರಾಜರುಗಳು, ಅವರ ದರ್ಬಾರುಗಳು ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಮಾನವೀಯತೆಯ ಸೆಲೆ ಎಲ್ಲಿದೆ ಎಂದು ಹುಡುಕುವುದೇ ಕಷ್ಟವೇನೋ.
ಕಾರ್ಪೊರೇಟರ್ ಕೈಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ಫ್ಯೂನ್ ಇರಲಿ, ಕಸ ಎತ್ತುವ ಝೂಡಮಾಲಿ ಇರಲಿ ಅವರೂ ಮನುಷ್ಯರೇ ಎಂದೂ ಅವರಿಗೂ ಆತ್ಮಗೌರವ ಇದೆ ಎಂದೂ ನಾವು ಗಮನಿಸಬೇಕಾಗಿದೆ. ಬಿಗ್‌ಬಜಾರ್‌ನಂತಹ ಮಾಲ್‌ಗಳಲ್ಲಿ ಕೇಳಿದ ಬೆಲೆ ಕೊಟ್ಟು ಕೊಳ್ಳುವ ನಾವು ಗಾಡಿಯಲ್ಲಿ ತರಕಾರಿ ಮಾರುವವರಲ್ಲಿ, ಚಪ್ಪಲಿ ಹೊಲೆಯುವವರಲ್ಲಿ ಚೌಕಾಸಿಗಿಳಿಯುತ್ತೇವೆ. ಇತ್ತೀಚೆಗಿನ ವರ್ಷಗಳಲ್ಲಿ ದಕ್ಷಿಣ ಕನ್ನಡದಲ್ಲೊಂದು ಬೆಳವಣೆಗೆ ಗಮನಿಸಬಹುದು. ಅದು ಉತ್ತರ ಕರ್ನಾಟಕ, ಘಟ್ಟದ ಮೇಲೆ ‘ ಎಂದು ಹೇಳಲ್ಪಡುವ ಜಾಗಗಳಿಂದ ಕಾರ್ಮಿಕರ ವಲಸೆ ಹೆಚ್ಚಾಗಿ ಕಟ್ಟಡ ನಿರ್ಮಾಣದಲ್ಲಿ, ಮನೆಕೆಲಸ ( ಮಹಿಳೆಯರು) ವಾಚ್ ಮನ್, ಸೆಕ್ಯುರಿಟಿ ಗಾರ್ಡ್ ಈ ರೀತಿಯ ವೃತ್ತಿಗಳಲ್ಲಿರುತ್ತಾರೆ. ಮುಂಬಯಿಯ ಸ್ಲಮ್ಮುಗಳಲ್ಲಿ ಬದುಕುವುದಕ್ಕಿಂತ ಬಹುಶ: ನಮ್ಮ ಊರೇ ಅವರಿಗೆ ಉತ್ತಮವೇನೋ ಹಳ್ಳಿಗಳಲ್ಲೂ ಪರಿಸ್ಥಿತಿ ಕಠಿಣವೇ ( ಅಸಲಿಗೆ ಹಳ್ಳಿಗಳಲ್ಲಿ ಜೀವನ ದುಸ್ತರವಾದ ಕಾರಣವೇ ಸಿಟಿಗಳಿಗೆ ಗುಳೆ ಹೋಗುತ್ತಾರೆ) ನಗರಗಳ ಜನಸಂಖ್ಯೆ ಜಾಸ್ತಿಯಾದಂತೆಲ್ಲ ವಸತಿ, ವಿದ್ಯುತ್ ಸೌಕರ್ಯ, ನೀರಿನ ವ್ಯವಸ್ಥೆ ಹೀಗೆಲ್ಲ ದೈನಂದಿನ ಅವಶ್ಯಕತೆಗಳೇ ತತ್ಸಾರವಾಗಿ ಬಿಡುತ್ತವೆ. ಮಧ್ಯಮ ವರ್ಗದವರೇ ಬೆಲೆಯೇರಿಕೆಯಿಂದ ತತ್ತರಿಸುತ್ತಿರುವಾಗ ಕಡು ಬಡವರ ಬವಣೆ ಹೇಳತೀರದು.
‘ ಕೈಗಳೆಂದರೆ ಕಾಲಿಗಿಲ್ಲ′ ಎಂಬಂತಹ ಇಕ್ಕಟ್ಟಾದ ಮನೆಗಳಲ್ಲಿ, ಒಂದು ರೂಂ ಅಪಾರ್ಟ್‌ಮೆಂಟ್‌ಗಳಲ್ಲಿ ಬದುಕುವ ವರ್ಗ ಒಂದೆಡೆ ಆದರೆ ಕಲ್ಲು ನೆಲದಲ್ಲಿ ಟೆಂಟ್ ಹಾಕಿಕೊಂಡು, ಬೀದಿಬದಿಯಲ್ಲಿ ಗುಡಿಸಲು ಹಾಕಿಕೊಂಡು, ಹೆಚ್ಚೇಕೆ ಬಸ್‌ಸ್ಟಾಂಡ್‌ಗಳಲ್ಲಿ, ರೈಲ್ವೇ ಸ್ಟೇಷನ್ ಗಳಲ್ಲಿ ಮಲಗಿಕೊಂಡು ಜೀವನ ಎನ್ನುವ ಅನಿವಾರ್ಯ ಕರ್ಮವನ್ನು ಸವೆಸುವವರು, ದಿನವಿಡೀ ದುಡಿದ ಮೈ ಕೈ ನೋವು, ಅವಮಾನ, ತಿರಸ್ಕಾರದ ಯಾತನೆಯನ್ನು ಶರಾಬಿನ ನಶೆಯಲ್ಲಿ ಮರೆಯಲೆತ್ನಿಸುವವರು, ಈ ಕುಡುಕ ಗಂಡಂದಿರಿಂದ ಹೊಡೆತ ಬಡಿತ ತಿಂದು ತಾವೂ ಕೂದಲು ಬಿರಿ ಹುಯ್ದು ಎದೆಬಡಿದುಕೊಂಡು ಅಳುವ ಹೆಂಗಸರು- ಭವ್ಯ ಭಾರತದ ಕೆನೆಪದಕದ ಐಷಾರಾಮಿ ಜೀವನವೆಲ್ಲಿ, ಅತ್ಯಂತ ನಿಕೃಷ್ಟವಾದ, ಆತ್ಮಗೌರವನ್ನೇ ನುಚ್ಚು ನೂರಾಗಿಸುವ ಈ ಜೀವನವೆಲ್ಲಿ ? ( ಈ ವಿಷಯಗಳನ್ನೇ slumdog millionaire ನಂತಹ ಸಿನೆಮಾ ಮಾಡಿ ದುಡ್ಡು ಬಾಚುವುದೊಂದು Paradox)
ಇಷ್ಟಕ್ಕೂ ದಲಿತರು ಯಾರು ಎನ್ನುವುದು ಯೋಚಿಸಬೇಕಾದ ವಿಷಯ. ಸರಕಾರದ ಆಯಕಟ್ಟಿನ ವೃತ್ತಿಗಳಲ್ಲಿ ಪ್ರತಿಷ್ಠಿತ ಸ್ಥಾನಗಳಲ್ಲಿರುವ, ಕಡಿಮೆ ಅಂಕಗಳಿದ್ದರೂ ಸುಲಭವಾಗಿ ರಿಸರ್ವೇಶನ್ ಕೋಟಾ, ಸೀನಿಯಾರಿಟಿ, ಪ್ರಮೋಶನ್ ಪಡೆಯುವ so called ದಲಿತರು ಆ ಪದದ ಅರ್ಥಕ್ಕೆ ಅನ್ವಯಿಸುತ್ತಾರೆಯೇ? ಗೊತ್ತಿಲ್ಲ. ಯಾವುದೋ ಕಾಲಕ್ಕೆ ಸವರ್ಣಿಯರು ಶೋಷಿಸಿದ್ದರು ( ಈಗಲೂ ಇಲ್ಲದಿಲ್ಲ) ಎಂಬ ಕಾರಣಕ್ಕೆ ಯಾವುದೇ ಮೀಸಲಾತಿ ಇಲ್ಲದೆ ವಯೋಮಿತಿ ಮೀರುತ್ತಿರುವ ಬಡ ಬ್ರಾಹ್ಮಣರು, ಇನ್ನಿತರ ವರ್ಗದವರು ಯಾವ ಕೆಟಗರಿಗೆ ಸೇರಬೇಕು ? ಸ್ವಂತ ಹೋಟೆಲ್ ಮಾಡಿ ಗ್ರಾಹಕರ ತಟ್ಟೆ ತೊಳೆಯುವ, ಅಡಿಗೆಗೆ ಸಹಾಯಕರಾಗಿರುವವರು ಪೌರೋಹಿತ್ಯದ ದಕ್ಷಿಣೆಯಿಂದ ಬದುಕುವವರ ಮ್ಲಾನ ವದನ ನೋಡಿದರೆ ಇದಕ್ಕೆ ಉತ್ತರ ಸಿಕ್ಕೀತು. ಹೆಚ್ಚುತ್ತಿರುವ ಕ್ರೈಂ ರೇಟ್ ಗಳು, ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಬಿತ್ತುವ, ಲಾಂಗು ಮಚ್ಚುಗಳನ್ನು ಹಿಡಿದುಕೊಳ್ಳುವುದೇ ಅನ್ಯಾಯದ ವಿರುದ್ದದ ಹೋರಾಟವೆಂಬಂತೆ ಬಿಂಬಿಸುವ ಸಿನೆಮಾಗಳು, ‘ ಇನ್ನು ಸಾಕೀ ಬದುಕು’ ಎಂದು ಕೈ ಚೆಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರು (ಈಗೀಗ ಕುಟುಂಬ ಸಮೇತ) ಇವನ್ನೆಲ್ಲ ನೋಡಿದರೆ ನಮ್ಮ ಸಮಾಜ ಇತ್ತಕಡೆ ಸಾಗುತ್ತಿದೆ ಎಂದು ದಿಗ್ಭ್ರಮೆಯಾಗುತ್ತಿದೆ. ಮೇಲೆ ಹೇಳಿದ ವಿಷಯಗಳೆಲ್ಲ ದಿಢೀರನೇ ಉದ್ಭವನಾಗಿದ್ದೇನಲ್ಲವಾದರೂ ಅವುಗಳ ದಾರುಣತೆಗೂ ಬಡತನಕ್ಕೂ ನೇರ ಸಂಬಂಧವಿದೆ.
ಹೀಗಿದ್ದರೂ ‘ ತಾಳಿದವನು ಬಾಳಿಯಾನು’ ಎಂಬಂತೆ ಇಷ್ಟಿಷ್ಟೇ ಇಷ್ಟಿಷ್ಟೇ ಪ್ರವರ್ಧಮಾನಕ್ಕೆ ಬಂದ ಸಂಸಾರಗಳೂ ಇವೆ. ಯಾವ ನಾಗರೀಕರಣ ಬದುಕನ್ನು ಅಸಹನೀಯವಾಗಿದೆಯಾ ವೇ ನಗರಗಳಲ್ಲಿ ಬದುಕು ಕಂಡವರಿದ್ದಾರೆ. Entrepreneurship ಎನ್ನುವುದು ಅತ್ಯಂತ ಪಾಸಿಟಿವ್ ಆದ, ಜೀವನ್ಮಖಿ ಆದ ಮನೋಭಾವ ಇದಕ್ಕೆ ಅನೇಕ ನಿದರ್ಶನಗಳನ್ನು ಮೆಟ್ರೋ ಸಿಟಿಗಳಲ್ಲಿ ಕಾಣಬಹುದು. ಪ್ರವಾಸಿ ತಾಣಗಳಲ್ಲಿ ನಿಂತವರಿಗೆ ಲಿಂಬೆಪಾನಕ, ಫ್ಲಾಸ್ಕನಲ್ಲಿ ಟೀ. ಕಾಫಿ
ಸರಬರಾಜು ಮಾಡುವ, ಸಂಜೆ ಕೆಲಸದಿಂದ ಪ್ರವಾಹದಂತೆ ರೈಲುಗಳಿಂದ ಜನರು ಇಳಿದು ಬರುವಾಗ ಅಲ್ಲೇ ಮೊಟ್ಟೆಗೆ ಕರಿಮೆಣಸಿನ ಪುಡಿ, ಉಪ್ಪು ಹಾಕಿಕೊಡುವ, ಬೀಚುಗಳಲ್ಲಿ ನೇರಳಹಣ್ಣು, ಮಾವಿನಕಾಯಿ, ಸೀಬೆಕಾಯಿ ಮಾರುವ , ಆಕರ್ಷಕ ಮಾತುಗಾರಿಕೆಯಿಂದ ಟ್ರಾವೆಲ್ ಗೈಡ್ ಗಳಾಗುವ ॒ಹೀಗೆ.
ಸರಬರಾಜು ಮಾಡುವ, ಸಂಜೆ ಕೆಲಸದಿಂದ ಪ್ರವಾಹದಂತೆ ರೈಲುಗಳಿಂದ ಜನರು ಇಳಿದು ಬರುವಾಗ ಅಲ್ಲೇ ಮೊಟ್ಟೆಗೆ ಕರಿಮೆಣಸಿನ ಪುಡಿ, ಉಪ್ಪು ಹಾಕಿಕೊಡುವ, ಬೀಚುಗಳಲ್ಲಿ ನೇರಳಹಣ್ಣು, ಮಾವಿನಕಾಯಿ, ಸೀಬೆಕಾಯಿ ಮಾರುವ , ಆಕರ್ಷಕ ಮಾತುಗಾರಿಕೆಯಿಂದ ಟ್ರಾವೆಲ್ ಗೈಡ್ ಗಳಾಗುವ ॒ಹೀಗೆ.
ಇನ್ನು ನಮ್ಮೂರಲ್ಲೂ ಹೊಸಟ್ರೆಂಡ್ ಪ್ರಾರಂಭವಾಗಿದೆ. ದುಡಿಯುತ್ತಿರುವ ಹೆಣ್ಣು ಮಕ್ಕಳಿಗೆ ದಿನಾ ಇಡ್ಲಿ, ದೋಸೆ, ಶ್ಯಾವಿಗೆ ಹೀಗೆ ಸಮಯ ಬೇಡುವ ಊಟ ತಿಂಡಿಗಳನ್ನು ತಯಾರಿಸುವುದು ಕಷ್ಟವೇ. ಬೇಕರಿಗಳಲ್ಲಿ ಈಗ ಮಾರುವ ಪತ್ರೋಡೆ, ಕಡುಬು ಮೊದಲುಗೊಂಡು ಹಾಫ್ ಬೇಕ್ಡ್ ಪರೋಟಾಗಳು, ಫ್ರೋಝನ್ ಫುಡ್‌ಗಳು ಒಂದು ರೀತಿಯ Entrepreneurship ಮೈಸೂರುಮಲ್ಲಿಗೆಯನ್ನು ಮಂಗಳೂರಿನ ಮನೆಗಳಿಗೆ ಸಪ್ಲೈ ಮಾಡುವ ಹೂ ಮಾರುವ ಅಜ್ಜ ( ವರ್ಡ್ಸ್‌ವರ್ತನ ‘ Leech Gatherer ನ್ನು ನೆನಪಿಸುತ್ತದೆ ಅವನ ಸ್ವಾಭಿಮಾನ), ತನ್ನ ವಾಚ್ ಮಾನ್ ಕೆಲದೊಂದಿಗೆ ಇನ್ನಿತರ ಸಣ್ಣಪುಟ್ಟ ಆದಾಯ ಗಳಿಸಿಕೊಂಡು ಮೂರು ಮಕ್ಕಳನ್ನು ಓದಿಸುತ್ತಿರುವವರು, ನಾಲ್ಕುಮನೆ ಕಸ ಮುಸುರೆ ಮಾಡಿ ತನ್ನ ಮಗಳನ್ನು ಡಿಗ್ರಿ ಓದಿಸಿದ ಮಹಿಳೆ, ರಿಕ್ಷಾ ಡ್ರೈವ್ ಮಾಡುತ್ತ ತನ್ನ ಮಗನನ್ನು ಇಂಜಿನಿಯರಿಂಗ್ ಓದಿಸುವ ಅಪ್ಪಟ ಆಶಾಭಾವ – ಇದಲ್ಲವೆ ಜೀವನ ಪ್ರೀತಿ ?
ಜಯಶ್ರೀ ಬಿ.ಕದ್ರಿ
No comments:
Post a Comment