‘ ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ’ ‘ ನನ ಕೈಯ ಹಿಡಿದಾಕೆ ಅಳುನುಂಗಿ ನಗು ಒಮ್ಮೆ ಹೀಗೆಲ್ಲ ಅವಡುಕಚ್ಚಿ ಅಳು ನುಂಗಿ ನಗುವ ಅನಿವಾರ್ಯತೆ ಸಕಲ ಜೀವಿಚರಾಚರಗಳಿಗೂ ಇದೆ. ಕಡಿದಿಟ್ಟ ಗಿಡ ಕಾಂಡದಿಂಧ ಮರಳಿ ಚಿಗುರೊಡೆಯುತ್ತಿರುತ್ತದೆ. ಕುಂಟಿಕೊಂಡು ನಡೆಯುವ ನಾಯಿ, ಭಾರವಾದ ಕೆಚ್ಚಲು ಹೊತ್ತು ನಿಧಾನವಾಗಿ ನಡೆಯುವ ಹಸು ಹೆಚ್ಚೇಕೆ ಬೀದಿಬದಿಯ ಭಿಕ್ಷುಕರು ಕೂಡ ಯಾವುದೋ ಭರವಸೆಯನ್ನು ಹೊತ್ತೇ ಬದುಕುತ್ತಿರುತ್ತಾರೆ.
ಅಳುವಿಗೂ ನಗುವಿಗೂ ಬಹುಶ: ಹೆಚ್ಚು ಅಂತರವೇನಿಲ್ಲ. ಇದಕ್ಕಾಗಿಯೇ ನೋವು ಮರೆಸುವ ಪರಿಕರಗಳನ್ನು ಸಂಗೀತ, ಆಧ್ಯಾತ್ಮ, ವಾಕಿಂಗ್, ಪುಸ್ತಕಗಳು, ಸಿನೆಮಾಗಳು, ಕಾಮಿಡಿ ಪ್ರೋಗ್ರಾಮ್ ಅರ್ಥಹೀನ ಧಾರಾವಾಹಿಗಳು ಹೀಗೆ ಟೆಂಪರರಿ ರಿಲೀಫ್ ಕೊಡುವ ವಿಷಯಗಳನ್ನು ಹುಡುಕಿಕೊಳ್ಳುತ್ತೇವೆ. (ಪೇನ್ ಕಿಲ್ಲರ್ ತರ) ಅವು ಎಷ್ಟರ ಮಟ್ಟಿಗೆ ಎದೆಯ ಕುದಿತವನ್ನು, ತಳಮಳಗಳನ್ನು ನೀಗಿಸುತ್ತದವೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ತಮಾಷೆಯಾದರೂ ಖುಶಿಯ ವಿಷಯವೆನೆಂದರೆ ಜಗತ್ತಿನ ಎಲ್ಲರಿಗೂ ಹೀಗೆಯೇ ಅನಿಸುತ್ತದೆಯೆಂದೂ, ಪ್ರತಿಯೊಬ್ಬರೂ ತಮಗೆ ಇಷ್ಟು ಕಷ್ಟಗಳು ಯಾಕೆ ಬರುತ್ತವೆಂದು ದು:ಖಿಸುತ್ತಾರೆಂದೂ ನಮಗೆ ಆ ಮೇಲಾಮೇಲೆ ಅರಿವಾಗುತ್ತದೆ.
.
ಮಾರುಕಟ್ಟೆಯಲ್ಲಿ ಧಂಡಿಯಾಗಿ ಮಾರಾಟವಾಗುವ ವ್ಯಕ್ತತ್ವ ವಿಕಸನ ಪುಸ್ತಕಗಳು, Self improvement ಪ್ರೊಗ್ರಾಂಗಳು, ಆಡಿಯೋ ಕ್ಯಾಸೆಟ್ ಗಳು, orientation ಗಳು ಬದುಕು ಬದಲಿಸಲು ಮನುಷ್ಯರಿಗಿರುವ ತಹತಹಿಕೆಯನ್ನು ತೋರಿಸುತ್ತವೆ. ( ಈ ರೀತಿಯ ಪುಸ್ತಕಗಳು, ಮೋಟಿವೇಶಲ್ ಸ್ಚಿಚ್ ಗಳನ್ನು ಕೊಡುವುದೇ ಕೆಲವರ ಫುಲ್ ಟೈಂ ಬಿಸಿನೆಸ್) ಇಷ್ಟಕ್ಕೂ ದಿಗ್ಗನೇಳುವ ಹಳೆಯ ನೆನಪುಗಳು, ನೋವು ಅಪಮಾನಗಳಿಗೆ, ಗಾಯಗಳಿಗೆ ಎಲ್ಲಿಯ ಮದ್ದಿದೆ? ಇದ್ದರೂ ಅವು ತಾತ್ಕಾಲಿಕ, ಆಯಿಂಟ್ ಮೆಂಟ್‌ನಂತೆ ಮತ್ತೆ ಮತ್ತೆ ನೋಡಿಕೊಳ್ಳುವ ಕಲೆಗಳಂತೆ ಅವುಗಳೊಂದಿಗೆ ಜೀವನ ಸವೇಸಬೇಕಾದುದು ಮನುಷ್ಯರ ಅನಿವಾರ್ಯತೆ. ಟಿವಿಯಲ್ಲಿನ ಜ್ಯೋತಿಷ್ಯ, ವಾಸ್ತು ಪ್ರೊಗ್ರಾಂಗಳು, ಫೋನ್-ಇನ್ ಕಾರ್ಯಕ್ರಮಗಳು, ಪತ್ರಿಕೆಗಳಲ್ಲಿನ ಕೌನ್ಸೆಲಿಂಗ್ ವಿಭಾಗ ಇವೆಲ್ಲ ಈ ರೀತಿಯ ಅಳುನುಂಗಿ ನಗಲು, ಜೀವನ್ಮುಖಿಯಾಗಿ ಬಾಳಲು ಪ್ರೇರೇಪಿಸುವ ಕಾರ್ಯಕ್ರಮಗಳೇ ( ಅಡ್ವೈಸ್ ಕೊಡುವವರೇ ನೆಟ್ಟಗಿಲ್ಲದಿದ್ದರೆ ಅದು ಬೇರೆ ವಿಷಯ).

ಎದೆಯಲ್ಲಿ ಧಗಧಗಿಸುವ ಅಗ್ನಿಕುಂಡ ಇಟ್ಟುಕೊಂಡರೂ ಸರಿ ಜಗತ್ತನ್ನೇ ಗೆಲ್ಲುವ ಆತ್ಮ ವಿಶ್ವಾಸ, ಮುಗುಳ್ನಗೆಯೊಂದಿಗೆ ದಿನವನ್ನು ಎದುರುಗೊಳ್ಳಬೇಕಂತೆ. ಬ್ಯೂಟಿಪಾರ್ಲರ್, ಜಿಮ್ ಗಳ ಕೆಟಲಾಗ್ ನೋಡಿದರೆ ಸಾಕು ಈ ಜೀವನದ ನಶ್ವರತೆಯಲ್ಲೂ ಬದುಕಲು ಏನೆಲ್ಲ ಕಾರಣಗಳಿವೆ ಎಂದು ಆಶ್ಚರ್ಯವಾಗುತ್ತದೆ. ಹಾಗಿದ್ದರೂ ಕೂದಲಿಗೂ ಬಣ್ಣ ಹಚ್ಚುವುದರಿಂದ ಹಿಡಿದು ಕಾಲಿನ ಪೆಡಿಕ್ಯೂರ್ ನ ವರೆಗೆ ಅಪ್ಪಟ ಜೀವನ್ಮಖತೆ ಅವುಗಳಲ್ಲಿವೆ. (ಹಣವನ್ನು ನೀರಿನಂತೆ ಖರ್ಚು ಮಾಡಬೇಕಷ್ಟೆ) ಆಧುನಿಕ ಬದುಕಿನ ಮಾರ್ಕೆಟಿಂಗ್ ತಂತ್ರಗಳು ಇನ್ನಷ್ಟು innovative. ಅಶಾಂತಿ ಕೂಡ ಮಾರಾಟದ ವಸ್ತು. ಹೃಷಿಕೇಶ, ಕೇದಾರ ಹೀಗೆ ಪ್ಯಾಕೇಜ್ ಟೂರ್ ಹೋಗಬಹುದು. ಬೇಕಾದರೆ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ವರ್ಷವರ್ಷವೂ ಹೋಗಲು ರೂಂ ಬುಕ್ ಮಾಡಬಹುದು. ಇನ್ನು ಆಧ್ಯಾತ್ಮ ಗುರುಗಳು, ಯೋಗಿಗಳು, ಮಠಗಳು, ಅಬ್ಬಬ್ಬಾ ! ಇಷ್ಟು ಸಾಲದ್ದಕ್ಕೆ ಆಧ್ಯಾತ್ಮ ಮತ್ತು ಮ್ಯಾನೆಜ್ ಮೆಂಟ್ ಕಂಬೈನ್ ಮಾಡುವ ರಾಬಿನ್ ಶರ್ಮಾ, ಅರಿಂದಮ್ ಚೌಧುರಿ, ದೀಪಕ್ ಚೋಪ್ರಾ ಹೀಗೆ ಮಾರ್ಡನ್ ಗುರುಗಳು ಲೈಫ್ ಹೋತೋ ಜಿಂಗಲಾಲಾ !
ಜಯಶ್ರೀ ಬಿ.ಕದ್ರಿ
( ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ)
No comments:
Post a Comment