ದಶಕದ ಹಿಂದೆ ಮಾನಸ ಗಂಗೋತ್ರಿಯಲ್ಲಿ ಪಿಜಿ ಮಾಡುವಾಗ ನಮ್ಮ ಇಂಗ್ಲಿಷ್ ಪ್ರೊಫೆಸರ್ ಮೈ ರಸ್ತೇ ಮೇ ಜಾ ರಹಾ ಥಾ ವೋ ಭೇಲ್ ಪುರಿ ಖಾ ರಹೀ ಥೀ ಹಾಡನ್ನು ಬೈದುಕೊಳ್ಳುತ್ತಿದ್ದರು. ‘ಇದರಲ್ಲೇನಾದರೂ ಸೌಂದರ್ಯ ಪ್ರಜ್ಞೆ ಇದೆಯಾ’. ಸಾಹಿತ್ಯಕ ಮೌಲ್ಯ ಇದೆಯಾ ಹೀಗೆಲ್ಲ. ಹಾಗೆ ನೋಡುವುದಿದ್ದರೆ ನಾವೆಲ್ಲ ಒಳಗೊಳಗೆ ಆ ಹಾಡನ್ನು ಮೆಚ್ಚಿಕೊಳ್ಳುತ್ತಿದ್ದೆವು. ಹೌದು ಮಾಸ್ ಕಲ್ಚರ್, ಮಾಸ್ ಅಪೀಲ್ ಎಂದರೆ ಇದೇ., ಸಾಮಾನ್ಯ ಜನರಿಂದ ಪ್ರಚಲಿತಗೊಳ್ಳುವ ಕಲ್ಚರ್. ಇನ್ನು ಸಿನೆಮಾ, ರೇಡಿಯೋ, ಜಾಹೀರಾತುಗಳು, ಜನಪ್ರಿಯ ಕಾದಂಬರಿಗಳು, ಸೆನ್ಸೇಶನಲ್ ಟ್ಯಾಬ್ಲಾಯ್ಡ್‌ಗಳು – ಹೀಗೆ ‘ ಮಾಸ್ ಕಲ್ಚರ್’ ಎನ್ನುವುದು ನಮ್ಮನ್ನು ಅರಿತೋ ಅರಿಯದೆಯೋ ಪ್ರಭಾವಿಸುತ್ತಲೇ ಇರುತ್ತದೆ. ಉದಾಹರಣೆಗೆ ಬಿಗ್‌ಬಜಾರ್‌ಗೆ, ಮಲ್ಟಿಪ್ಲೆಕ್ಸ್‌ಗೆ ಹೋಗುವಾಗ ಸ್ಟೈಲಿಶ್ ಡ್ರೆಸ್ ಹಾಕಬೇಕೆಂಬ ಲಿಖಿತ ನಿಯಮದಂತೆ ಜಾಗತೀಕರಣದಿಂದಾಗಿ ಸಮಾಜದಲ್ಲಿ ಎಂತಹ ಕಂದಕ ಸೃಷ್ಟಿಯಾಗಿದೆಯೆಂದರೆ ವಿಜ್ಞಾನ, ತಂತ್ರಜ್ಞಾನದ ಅರಿವಿಲ್ಲದವರು, ಇಂಗ್ಲೀಷನ್ನು ಸ್ಪುಟವಾಗಿ ಮಾತನಾಡಲು ಬಾರದವರು ಮೂಲೆಗುಂಪಾಗುವ ಪರಿಸ್ಥಿತಿ ಹಾಗಿದ್ದರೂ ಸ್ಥಳೀಯ ನೆಲೆಯಲ್ಲಿ ನಮ್ಮದೇ ವಿಧಾನದಲ್ಲಿ ಜಾಗತೀಕರಣಕ್ಕೆ ನಾವು ಪ್ರತಿರೋಧಗಳನ್ನೊಡ್ಡುತ್ತಿದ್ದೇವೆ. ಈ ಕುರಿತು ಒಂದು ಪುಟ ಪ್ರಯತ್ನ.
ಒಂದು ರೀತಿಯ ‘ ಹೈಬ್ರಿಡ್ ‘ ಸಂಸ್ಕೃತಿ ನಮ್ಮ ಉಡುಗೆ ತೊಡುಗೆಯಿಂದ ಹಿಡಿದು ಕಲೆ, ನಾಟಕ ಎಲ್ಲದರಲ್ಲಿಯೂ ಛಾಪು ಒತ್ತಿರುವುದನ್ನು ನೋಡಬಹುದು. ‘ಫ್ಯೂಷನ್’ ಎನ್ನುವುದು ಸಂಗೀತ, ನಾಟಕಗಳಿಂದ ಹಿಡಿದು ಜೀನ್ಸ್ ಮೇಲೆ ಸಲ್ವಾರ್ ಟಾಪ್ ಹಾಕುವಂತಹ ಚಿಕ್ಕ ವಿಷಯಗಳಲ್ಲಿಯೂ ಕಂಡು ಬರುತ್ತವೆ. ಆಶ್ಚರ್ಯಕರವಾಗಿ ಧಾರ್ಮಿಕ ವಲಯದಲ್ಲಿಯೂ ಇವು ಮಿಳಿತವಾಗಿವೆ. ನಮ್ಮ ಜಾಹೀರಾತುಗಳು, ಸಿನೆಮಾ ಧಾರವಾಹಿಗಳೂ, ಇವುಗಳನ್ನು ಎನ್‌ಕ್ಯಾಷ್ ಮಾಡುತ್ತವೆ. ಹೊಸ ಮಾದರಿ ಕೆಮರಾದಲ್ಲಿ ಕಂಡು ಬರುವ ದೀಪಾವಳಿ, ಕ್ಯಾಡ್‌ಬರಿ ಜಾಹೀರಾತಿನ ರಾಖಿ ಹಬ್ಬ ಹೀಗೆ .ಇನ್ನು ಆಂಗ್ಲ ಭಾಷೆಯ ಪ್ರಭಾವ ಭಾರತೀಯ ಭಾಷೆಗಳ ಮೇಲೆ ಹೆಚ್ಚೆನಿಸುವಷ್ಟು ಇರುವುದು ಹೌದಾದರೂ ಸರಿಯಾಗಿ ಬಳಸಿದಲ್ಲಿ ಇಂಗ್ಲೀಷ್ ಪುಳಿಯೋಗರೆಯಲ್ಲಿನ ಕಡಲೆಕಾಯಿಯಷ್ಟು ಸಹಜವಾಗಿ ಬೆರೆತುಕೊಳ್ಳುತ್ತದೆ. ಇಂಗ್ಲೀಷನ್ನೇ ರೂಪಾಂತರ ಮಾಡಿದ ಖ್ಯಾತಿ ಭಾರತೀಯರದ್ದು. ಇನ್ನು ನಮ್ಮ ಫಿಲ್ಮ್ ಗಳಲ್ಲಿ, ಹಾಡುಗಳಲ್ಲಿ ಕೇಳಿ ಬರುವ ಇಂಗ್ಲೀಷ್ ಶಬ್ದಗಳು ಕೂಡಾ ಈ ಪೋಸ್ಟ್ ಮಾಡರ್ನ ಯುಗದ ಅಸಂಗತತೆಯ ಕನ್ನಡಿಯಂತೆಯೇ ಕಂಡುಬರುತ್ತದೆ.
ಇಷ್ಟೇ ಕುತೂಹಲಕಾರಿಯಾಗಿ ಪರ್ಯಾಯ ಸಂಸ್ಕೃತಿಯ, ಪ್ರತಿರೋಧದ ಬೆಳವಣಿಗೆಯನ್ನು ನಾವು ವಿವಿಧ ಸ್ತರಗಳಲ್ಲಿ ನೋಡುತ್ತಲೇ ಇರುತ್ತೇವೆ. ಸಮುದಾಯ ಭವನಗಳು, ಜಾತಿ ಸಂಘಗಳು, ಹಬ್ಬಗಳನ್ನು ಗ್ರಾಂಡ್ ಆಗಿ ಆಚರಿಸುವುದು ಇವು ಕೂಡ ಒಂದು ರೀತಿಯಲ್ಲಿ ಬೇರುಗಳನ್ನು ಕಂಡುಕೊಳ್ಳುವ ಪ್ರಯತ್ನವೇ ಇರಬೇಕು. ಇವು ವ್ಯಾಪಾರೀಕರಣಗೊಳುತ್ತಿರುವುದೂ ಸತ್ಯ. ಅಕ್ಷಯ ತೃತೀಯಾ ದಂತಹ ಹಬ್ಬಗಳನ್ನು ನಾವು ಕೇಳಿಯೇ ಇರಲಿಲ್ಲ. ಟಿವಿಯಂತಹ ಮಾಸ್ ಮೀಡಿಯಾದಿಂದಾಗಿ ಉತ್ತರಭಾರತದ ರೀತಿ ರಿವಾಜುಗಳನ್ನೂ ನಾವು ಆಚರಿಸಲಾರಂಭಿಸಿದ್ದೇವೆ.
.
ಆಧುನಿಕತೆ- ಸಂಪ್ರದಾಯಗಳ ತಾಕಲಾಟವನ್ನು ಮೀರುವ ಅನೇಕ ಪ್ರಯತ್ನಗಳನ್ನು ನಾವು ಮಾಡುತ್ತಲೇ ಇರುತ್ತೇವೆ. ಒಂದು ರೀತಿಯಲ್ಲಿ ಇವು ಪಾಶ್ಚಾತ್ಯ ಪ್ರಭಾವದ ವಿರುದ್ಧದ ಪ್ರತಿರೋಧ ಕೂಡ ಜೀನ್ಸ್ ಹಾಕುವ ಮಗಳಿಗೆ ಜರಿ ಲಂಗ ತೊಡಿಸಿ ಸಂಕ್ರಾಂತಿಗೆ ಎಳ್ಳು ಬೀರಲು ಕಳುಹಿಸುತ್ತೇನೆ. ಭರತನಾಟ್ಯ ಕ್ಲಾಸಿಗೆ ಹಾಕುತ್ತೇವೆ. ಇಂಗ್ಲೀಷ್ ಮೀಡಿಯಂನ ಹುಡುಗರಿಗೆ ತಬಲಾ, ಕೊಳಲು ಕಲಿಯಲು, ಕಾಲೇಜು ಹುಡುಗರಿಗೆ ಕನ್ನಡ ಸಂಘಕ್ಕೆ ಸೇರಿಕೊಳ್ಳಲು ಪ್ರೋತ್ಸಾಹಿಸುತ್ತೇವೆ.
ಇನ್ನು ಆಧುನಿಕ ಜೀವನದ ಪರಿವರ್ತನೆಗಳಲ್ಲಿ ಕೆಲವು ಅನಿವಾರ್ಯವಾದರೂ ಧನಾತ್ಮಕ ಕೂಡ. ಉದಾಹರಣೆಗೆ ಫ್ಲಾಟ್ ಸಂಸ್ಕೃತಿ ಹಿಂದಿನ ಕಾಲದ ಕಠೋರ ಜಾತಿ ಪದ್ಧತಿಯಲ್ಲಿ ವಿಭಿನ್ನ ಜಾತಿಗಳವರು ಒಂದೇ ಸೂರಿನಡಿಯಲ್ಲಿ ಬದುಕುವುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಈಗ ನೋಡಿದರೆ ಫ್ಲಾಟ್ ಗಳಲ್ಲಿ, ಮಾಲ್‌ಗಳಲ್ಲಿ, ವಸತಿ ಸಮುಚ್ಛಯಗಳಲ್ಲಿ ಜಾತಿಗೆ ಅಂತಹ ಪ್ರಾಧಾನ್ಯತೆ ಏನಿಲ್ಲ. ಈಗೇನಿದ್ದರೂ ಎರಡೇ ಜಾತಿ; ದುಡ್ಡು ಇರುವವರು ಹಾಗೂ ಇಲ್ಲದವರು ಎಂದು.
‘ಸಂಸ್ಕೃತಿ’ ಎನ್ನುವುದು ವ್ಯಾಪಾರೀಕರಣ ಗೊಂಡಿರುವುದನ್ನು, ಮಾರಾಟದ ಸರಕು ಆಗಿರುವುದನ್ನು ನಾವಿಲ್ಲಿ ಗಮನಿಸಬೇಕು. ಪರಿಸರ ಪ್ರಜ್ಞೆಯೇ ಇಲ್ಲದೆ ಯುಗಾದಿ ಇನ್ನಿತರ ಹಬ್ಬಗಳ ಸಂದರ್ಭದಲ್ಲಿ ಮಾವಿನ ಮರ, ಬೇವಿನ ಮರ, ಗರಿಕೆ, ಎಕ್ಕ ಎಂದೆಲ್ಲ ಸಸ್ಯಗಳನ್ನು ತರಿಯುತ್ತೇವೆ. ಕೊಲ್ಲಾಪುರದಂತಹ ಮಹಾಲಕ್ಷ್ಮಿ ದೇಗುಲಗಳಲ್ಲಿ ಸಹಸ್ರಾರು ತಾವರೆಗಳು ಎಲ್ಲಿಂದಲೋ ಸರಬರಾಜಾಗುತ್ತವೆ. ಧನಾತ್ಮಕ ವಿಷಯವೆಂದರೆ ಮರೆತೇ ಹೋಗಬಹುದಾಗಿದ್ದ ಹಳೆಯ ಪುರಾಣಗಳೆಲ್ಲ ಟಿವಿಯಲ್ಲಿ ರಂಜನೀಯವಾಗಿ ಮೂಡಿ ಬರುತ್ತವೆ. ಡ್ರಾಯಿಂಗ್ ರೂಮಿನಲ್ಲಿ ಕುಳಿತುಕೊಂಡೇ ದೇಶದ ಯಾತ್ರಾ ಸ್ಥಳಗಳನ್ನು ನೋಡಬಹುದು. ಹುಲಿವೇಷದಿಂದ ಹಿಡಿದು ದಸರಾ ಟ್ಯಾಬ್ಲೋಗಳನ್ನು ಲೈವ್ ಆಗಿ ನೋಡಿ ಆನಂದಿಸಬಹುದು.

ಜಾಗತೀಕರಣಕ್ಕೆ ಪ್ರಬಲ ಪ್ರತಿರೋಧವೆಂದರೆ ‘ ಸಂಸ್ಕೃತಿಯ ಪುನರುತ್ಥಾನ ಎನ್ನುವ ಕಾನ್ಸೆಪ್ಟ್ ಸಂಸ್ಕೃತಿಯ ಪುನರುತ್ಥಾನದ ಭರದಲ್ಲಿ ಹಳೆಯ ಮೌಲ್ಯಗಳನ್ನು ಪುನರುಜ್ಜೀವಗೊಳಿಸುತ್ತಿದ್ದೇವೇನೋ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಉದಾಹರಣೆಗೆ ಇಂದಿರಾ ಗಾಂಧಿಯವರ ಕಾಲದಲ್ಲಿ ಬಾಬ್‌ಕಟ್ ದಿಟ್ಟತನ, ಸ್ವಾಭಿಮಾನದ ಪ್ರತೀಕವಾಗಿತ್ತು. ಈಗ ನೋಡಿದರೆ ಸೀರಿಯಲ್‌ಗಳಿಂದ ಹಿಡಿದು ಫ್ಯಾಷನ್ ಷೋಗಳಲ್ಲಿ ಕೂಡ ನೇರವಾಗಿ ಉದ್ದವಾಗಿರುವ ಕೂದಲಿನಲ್ಲಿ ಲಲನೆಯರು ಲಕಲಕಿಸುತ್ತಿರುತ್ತಾರೆ. ಇನ್ನು ಸೀರೆಯಷ್ಟು ನವಿರು ಭಾವನೆಗಳನ್ನು, ಪುಳಕಗಳನ್ನು ಹುಟ್ಟಿಸುವ, ಅಂತೆಯೇ ಹೆಣ್ಣಿನ ಚಲನವಲನಗಳನ್ನು ನಿಯಂತ್ರಿಸುವ ಬಟ್ಟೆ ಇನ್ನೊಂದಿಲ್ಲ. ಈ ಸೀರೆ ಕೂಡ ಫ್ಯಾಷನ್ ಸ್ಟೇಟ್ ಮೆಂಟ್ ಆಗಿರುವುದು ಅದರ ನವನವೋನನ್ಮೇಷ ಕ್ವಾಲಿಟಿಗೆ ಸಾಕ್ಷಿ.
ಮಾಡರ್ನಿಟಿಯ ಇನ್ನೊಂದು ಅಂಶವೆಂದರೆ ಸೋಶಿಯಲ್ ನೆಟ್ ವರ್ಕಿಂಗಿನಿಂದಾಗಿರುವ ಸಂಚಲನ, ಅದೊಂದು ಗೀಳಾಗಿ ಪರಿಣಮಿಸಬಹುದಾದರೂ ಸತ್ಯನಾರಾಯಣ ಪೂಜೆಯಿಂದ ಹಿಡಿದು ಪಿಕ್ ನಿಕ್‌ನ ವರೆಗೆ ಫೆಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಾರೆ. ಅನೇಕರ ಫೋಟೋಗ್ರಾಫಿ ಕೌಶಲಕ್ಕೆ, ಕತೆ ಕವನ ಕಟ್ಟುವ ಹವ್ಯಾಸಕ್ಕೆ ಅವು ಇಂಬು ಕೊಟ್ಟಿರುವುದೂ ಸುಳ್ಳಲ್ಲ. ತಮ್ಮದೇ ಬ್ಲಾಗ್, ವೆಬ್ ಸೈಟ್ ಹೊಂದಿ ಬರೆಯುವವರೂ ಸಾಕಷ್ಟು ಜನರಿದ್ದಾರೆ.

ಗ್ಲೋಬಲ್ ಕ್ಯಾಪಿಟಲಿಸಂ ತಂದೊಡ್ಡಿದ ನಿಸ್ಸಹಾಯಕ ಸ್ಥಿತಿಯನ್ನು ನಾವಿಲ್ಲಿ ಮರೆಯುವಂತಿಲ್ಲ. ಚಾಕಲೇಟು ಜಾಹೀರಾತೊಂದರಲ್ಲಿ ತಮ್ಮ ಕೋಕೋ ಬೀಜ ಸೆಲೆಕ್ಟ್ ಆಗುವುದೇ ಪುಣ್ಯ ಎಂಬಂತಿರುವ ಆಫ್ರಿಕದ ಜನರಂತೆಯೇ ಹೆಚ್ಚು ಕಡಿಮೆ ನಮ್ಮ ಸ್ಥಿತಿ ಕೂಡ ನಮ್ಮ ಉದ್ಯೋಗಾವಕಾಶಗಳು ಅದರನ್ನವಲಂಬಿಸಿದ ಜೀವನ ಶೈಲಿ, ಸರಕಾರದ ಕಾನೂನುಗಳನ್ನೂ ಅವು ಜಾಗತಿಕ ವಿದ್ಯಮಾನಗಳನ್ನೂ ಅವಲಂಬಿಸಿರುವ ಕಾರಣ ನಾವು ನಮ್ಮ ಎಳೆ ಕಂದಮ್ಮಗಳನ್ನು ಕೂಡಿ ಹಾಕಿ ಇಷ್ಟ ಇಲ್ಲದ ಸಬ್ಜೆಕ್ಟ್ ಗಳನ್ನು ಕಲಿಯಲು ಪ್ರೇರೇಪಿಸುತ್ತೇವೆ. ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ ಒಂದೇ ರೀತಿಯ ಆಸಕ್ತಿಯುಳ್ಳ, ಚಿಂತನ ಶೈಲಿಯುಳ್ಳ, ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಂಡ ತಲೆಮಾರನ್ನು ನಾವು ರೂಪಿಸುತ್ತಿರುವುದು ಸತ್ಯ. ಯಕ್ಷಗಾನ ಜಾನಪದ ಕಲೆಗಳಿಗಿಂತ ನಮ್ಮ ಮಕ್ಕಳಿಗೆ ಹಾಲಿವುಡ್ ಮೂವಿಗಳು, ವೆಸ್ಟರ್ನ್ ಮ್ಯೂಸಿಕ್ ಇಷ್ಟ. ಅವರು ಓದುವುದೂ ಹೆಚ್ಚಾಗಿ ಇಂಗ್ಲೀಷ್ ಕಾದಂಬರಿಗಳನ್ನು. ಆಂಗ್ಲ ಮಾಧ್ಯಮದಲ್ಲಿ ಓದುವ ಕಾರಣ ಅವರ ಕನ್ನಡವೂ ಅಷ್ಟಕಷ್ಟೆ.
ಒಟ್ಟಿನ ಮೇಲೆ ‘ ಹಳೆ ಬೇರು ಹೊಸ ಜಿಗುರು’ ಎನ್ನುವಂತೆ ನಮ್ಮ ಸಂಸ್ಕೃತಿಯೊಂದಿಗೆ ಹೊಸ ಪ್ರಭಾವಗಳನ್ನು ಅಂತರ್ಗತಗೊಳಿಸಿಗೊಂಡು ಬೆಳೆಯಬೇಕಾಗಿರುವುದು ಭಾರತೀಯ ಜನತೆಯೆದುರಿನ ಸದ್ಯದ ಸವಾಲು.
ಜಯಶ್ರೀ ಬಿ.ಕದ್ರಿ.
No comments:
Post a Comment